ಬಡವರ ಹಸಿವು ನೀಗಿಸಲು ಸರ್ಕಾರ ಕೊಡ್ತಿರೋ ಅನ್ನಭಾಗ್ಯ ಯೋಜನೆಯ ಅಕ್ಕಿ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗ್ತಿದೆ. ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್‍ಗಳನ್ನ ಸೇರ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೇ ನಿಲ್ದಾಣದಲ್ಲಿ 2017ರಲ್ಲಿ ಟನ್‍ಗಟ್ಟಲೆ ಪಡಿತರ ಅಕ್ಕಿಯನ್ನ ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ರು. ಕಳೆದ ವರ್ಷ ಪಿಆರ್‍ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ ಮಾಡಿ, ಸುಮಾರು 8497 ಕ್ವಿಂಟಾಲ್‍ನಷ್ಟು ಅಂದ್ರೆ 1 ಕೋಟಿ 7 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನ ಹರಾಜು ಮಾಡಿದ್ದರು. ಕೋರ್ಟ್ ಆದೇಶದಂತೆ ಕೆಲ ರೈಸ್‍ಮಿಲ್‍ಗಳಿಗೆ ಬೀಗ ಹಾಕಲಾಗಿದೆ. ಆದರೂ, ಕೆಲ ಮಿಲ್ ಮಾಲೀಕರು ಭಯಪಡೆದೇ ಪಡಿತರ ಅಕ್ಕಿಯನ್ನ ಕಾಳಸಂತೆಯಲ್ಲಿ ಖರೀದಿ ಮಾಡ್ತಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ 14 ರೈಸ್ ಮಿಲ್‍ಗಳಿದ್ದು 3 ಮಿಲ್‍ಗಳು ಸ್ಟಾಪ್ ಆಗಿವೆ. ಉಳಿದಂತೆ ಬಹುತೇಕ ಮಿಲ್‍ಗಳಲ್ಲಿ ಸರ್ಕಾರ ಬಡವರಿಗೆ ಕೊಡುವ ಅಕ್ಕಿಯೇ ಸಿಗ್ತಿದೆ. ಬಂಗಾರಪೇಟೆ ತಹಸೀಲ್ದಾರ್ ದಯಾನಂದ್ ಮಾತ್ರ ಎಂದಿನಿಂತೆ ಕ್ರಮ ತಗೋತೀವಿ.. ಕಡಿವಾಣ ಹಾಕ್ತೀವಿ ಅಂತಾರೆ.
#HRRanganath #NewsCafe #PublicTV